ಮನೆಯಲ್ಲಿದ್ದ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ತಗುಲಿ ನವವಿವಾಹಿತ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಮಾಬುಕಳ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಅಶ್ವಿನಿ ಕುಂದರ್ (26) ಮೃತ ದುರ್ದೈವಿ. ಉಡುಪಿ ಮೂಲದ ಯುವಕನೊಂದಿಗೆ ಕಳೆದ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಅಶ್ವಿನಿ ಪಡುಕೆರೆ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ವಿವಾಹದ ಬಳಿಕ ಪತಿಯ ಮನೆಯಲ್ಲಿದ್ದ ಯುವತಿ, ಮಾಬುಕಳದ ತಾಯಿ ಮನೆ ಬಳಿ ನಡೆಯಲಿದ್ದ ದೈವಸ್ಥಾನದ ಜಾತ್ರೆ