ಮೈಸೂರು: ಸಿಎಂ ಸಿದ್ಧರಾಮಯ್ಯ ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮುಂಬರುವ ಚುನಾವಣೆಗೆ ದಿವಂಗತ ಪುತ್ರ ರಾಕೇಶ್ ನನ್ನು ತಮ್ಮ ಬದಲಿಗೆ ಕಣಕ್ಕಿಳಿಸುವ ಇರಾದೆಯಿತ್ತು. ನಂತರ ತಾನು ರಾಜಕೀಯದಿಂದ ದೂರವಾಗಬೇಕೆಂದಿತ್ತು ಎಂದಿದ್ದರು. ಅದೀಗ ನಿಜವಾಗಲಿದೆ. ಪುತ್ರ ರಾಕೇಶ್ ಏನೋ ಈಗಿಲ್ಲ. ಆದರೆ ಮುಂಬರುವ ವಿಧಾನಸಭೆ ಚುನಾವಣೆಯೇ ತನ್ನ ರಾಜಕೀಯ ಜೀವನದಲ್ಲಿ ಸ್ಪರ್ಧಿಸುವ ಕೊನೆಯ ಚುನಾವಣೆಯಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ