ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಅದರಂತೆ ಕಾನೂನು ಪ್ರಕಾರವಾಗಿಯೇ ನಮಗೆ ಸರಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದರು.ಆದರೆ ಅದು ಸಾಧ್ಯವಾಗದ ಕಾರಣ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಯಾವಾಗ ಬೇಕಾದ್ರೂ ಬೀಳಬಹುದು. ಕೆಲ ಸಣ್ಣಪುಟ್ಟ ಗೊಂದಲ, ಅಸಮಾಧಾನಗಳಿಂದಾಗಿ ದೋಸ್ತಿ ಸರಕಾರ ಹಣ್ಣಾಗಿದೆ. ಆ ಹಣ್ಣಿಗೆ ನಿಫಾ ವೈರಸ್ ಅಂಟಿದೆ.