ಬೆಂಗಳೂರು: ಕೊರೋನಾ ಎರಡನೇ ಅಲೆ ಸೆಲೆಬ್ರಿಟಿಗಳನ್ನೂ ಬಿಟ್ಟೂ ಬಿಡದೇ ಕಾಡುತ್ತಿದೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಗೂ ಕೊರೋನಾ ತಗುಲಿರುವುದು ಖಚಿತವಾಗಿದೆ.ಮಾಜಿ ಸಿಎಂ ಕುಮಾರಸ್ವಾಮಿಗೆ ಕೊರೋನಾ ಸೋಂಕು ಖಚಿತವಾದ ಬೆನ್ನಲ್ಲೇ ಅವರ ಪುತ್ರನಿಗೂ ಸೋಂಕು ತಗುಲಿದೆ. ತಂದೆಗೆ ಸೋಂಕು ತಗುಲಿದ ಬೆನ್ನಲ್ಲೇ ನಿಖಿಲ್ ಕೂಡಾ ಪರೀಕ್ಷೆಗೊಳಗಾಗಿದ್ದರು.ಇದೀಗ ತಮಗೂ ಸೋಂಕು ತಗುಲಿರುವುದಾಗಿ ಟ್ವೀಟ್ ಮಾಡಿರುವ ನಿಖಿಲ್ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ. ಸದ್ಯಕ್ಕೆ ಅವರು ಹೋಂ ಕ್ವಾರಂಟೈನ್