ಚುನಾವಣೆ ರಣಕಣ ದಿನಕ್ಕೊಂದು ತಿರುವುಪಡೆದುಕೊಳ್ಳುತ್ತಿರುವ ನಡುವೆಯೇ ಮಂಡ್ಯದಲ್ಲಿ ಮನೆ ಮಾಡ್ತೀನಿ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.ಮಂಡ್ಯದ ಪಾಂಡವಪುರದಲ್ಲಿ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದು, ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ರು.ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಾವೇಕೆ ಮಾಡ್ಸೋಣ? ಅಂತ ಮರು ಪ್ರಶ್ನೆ ಮಾಡಿದ್ರು.ಹೋದ ಕಡೆಯಲ್ಲ ನಮಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ನಾವ್ಯಾಕೆ ಕಲ್ಲು ತೂರಾಟ ಮಾಡ್ಸೋಣ?