ಕೊಡಗು: ಪ್ರವಾಹ ಪೀಡಿತ ಕೊಡಗಿನ ಸ್ಥಿತಿಗತಿ ಅಧ್ಯಯನ ನಡೆಸಲು ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭೇಟಿ ಕೊಡುತ್ತಿದ್ದಾರೆ. ಬೆಳಿಗ್ಗೆ ಮೈಸೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ನಿರ್ಮಲಾ ಸೀತಾರಾಂ ಬಳಿಕ ಕೊಡಗಿಗೆ ಭೇಟಿ ನೀಡಲಿದ್ದಾರೆ. ನಂತರ ಮಾದಾಪುರ ಸೇರಿದಂತೆ ಕೊಡಗಿನಲ್ಲಿ ಪ್ರವಾಹದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಅದಾದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.ಕೇಂದ್ರದ ಪ್ರತಿನಿಧಿಯಾಗಿ ಬರುವ ನಿರ್ಮಲಾ ಸೀತಾರಾಂ ಸುಮಾರು ಮೂರು ಗಂಟೆಗಳ