ಕೊಡಗು: ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮಾದಾಪುರಕ್ಕೆ ತೆರಳಿ ಅಲ್ಲಿ ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಿದ ಸಚಿವೆ ನಿರ್ಮಲಾ ಸೀತಾರಾಂ ರಕ್ಷಣಾ ಕಾರ್ಯಪಡೆಗಳು, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ, ಸಂತ್ರಸ್ತರ ಸ್ಥಿತಿ ಗತಿಗಳ ಬಗ್ಗೆಯೂ ತಿಳಿದುಕೊಂಡರು.ಆದರೆ ಸಚಿವರ ಪರಿಶೀಲನೆ ಬಗ್ಗೆ ಚಿತ್ರೀಕರಿಸಲು ಮಾಧ್ಯಮಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆಯಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಸಚಿವರ