Widgets Magazine

ಅನರ್ಹ ಶಾಸಕರಿಗೆ ಪ್ರವೇಶ ಇಲ್ಲಾ – ಹುಟ್ಟಿದ ಊರಿನಲ್ಲೇ ಬಿಜೆಪಿ ಅಭ್ಯರ್ಥಿಗೆ ಮುಖಭಂಗ

ಚಿಕ್ಕೋಡಿ| Jagadeesh| Last Modified ಶುಕ್ರವಾರ, 29 ನವೆಂಬರ್ 2019 (16:18 IST)
ಅನರ್ಹ ಶಾಸಕರಿಗೆ ಗ್ರಾಮದಲ್ಲಿ  ಪ್ರವೇಶ ಇಲ್ಲಾ. ಹೀಗಂತ ಬ್ಯಾನರ್ ಅಳವಡಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅಳವಡಿಸಿದ ಬ್ಯಾನರ್ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಶಿವಯೋಗಿ ಪುಣ್ಯ ಕ್ಷೇತ್ರ. ಇಲ್ಲಿ ಹಣಕ್ಕಾಗಿ ಮಾರಿಕೊಂಡ ಅನರ್ಹ ಶಾಸಕರಿಗೆ ಗ್ರಾಮದಲ್ಲಿ ಪ್ರವೇಶ ಇಲ್ಲಾ ಎಂದು ಬೋರ್ಡ್ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಜಾನನ ಮಂಗಸೂಳಿ ಪರ ಮತಯಾಚಿಸಲು ತೆಲಸಂಗ ಗ್ರಾಮಕ್ಕೆ ಆಗಮಿಸಿದ್ರು ಮಾಜಿ ಸಿಎಮ್ ಸಿದ್ದರಾಮಯ್ಯ. ಅಂದ್ಹಾಗೆ ತೆಲಸಂಗ ಗ್ರಾಮವು ಬಿಜೆಪಿ ಅಭ್ಯರ್ಥಿ  ಮಹೇಶ ಕುಮಠಳ್ಳಿ ಅವರ ಸ್ವ ಗ್ರಾಮವಾಗಿದೆ.


 
ಇದರಲ್ಲಿ ಇನ್ನಷ್ಟು ಓದಿ :