ಹೊರ ಆವರಣದಲ್ಲಿರುವ ಕಂಬಗಳು ಹಾಗೂ ವೈರ್ ಗಳು ಇನ್ಮುಂದೆ ಈ ನಗರದಲ್ಲಿ ಕಾಣೋದೇ ಇಲ್ಲ. ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿಗಾಗಿ ವಿಜಯಪುರ ನಗರಕ್ಕೆ 230 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.ಒಟ್ಟು ಕಾಮಗಾರಿಯ ಪೈಕಿ 60 ಕೋಟಿ ರೂಪಾಯಿ ಸಿವಿಲ್ ಕಾಮಗಾರಿಯಿದ್ದು, ಈ ಮೂಲಕ ನಗರಕ್ಕೆ ಸಂಪೂರ್ಣವಾಗಿ ಅಂಡರ್ ಗ್ರೌಂಡ್ ಕೇಬಲ್ ಅವವಡಿಸಿ ವಿದ್ಯುತ್ ಪೂರೈಸಲಾಗುತ್ತದೆ.ಈಗಾಗಲೇ ಮಂಜೂರು ದೊರೆತಿದ್ದು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು.