1 ಹಾಗೂ 2ನೇ ಅಲೆಗಳಿಗಿಂತ ಮೂರನೇ ಅಲೆ ಇನ್ನೂ ಭಯಾನಕವಾಗಿರುತ್ತೆ ಎಂದು ತಜ್ಞರು ಹೇಳಿದ್ದರು. ಮುಂಜಾಗ್ರತಾ ಕ್ರಮವಾಗಿ ಸರ್ಕಾರಗಳು ವೈದ್ಯಕೀಯ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಯಾಕೆಂದರೆ ಕೊರೋನಾ 2ನೇ ಅಲೆ ವೇಳೆ ಬೆಡ್, ಆಕ್ಸಿಜನ್ ಸಿಗದೇ ಸಾವಿರಾರು ಮಂದಿ ಅಸುನೀಗಿದ್ದರು. ಈ ಘಟನೆ ಮರುಕಳಿಸಬಾರದೆಂದು ಸರ್ಕಾರಗಳು ಪ್ರಯತ್ನ ಮೀರಿ ಸಿದ್ದತೆ ಮಾಡಿಕೊಂಡಿದ್ದವು. ಮಕ್ಕಳನ್ನು ಹೆಚ್ಚಾಗಿ ಭಾದಿಸುತ್ತೆ ಎಂದು ಹೇಳಲಾಗಿದ್ದ ಕೊರೋನಾ 3ನೇ ಅಲೆ ಈಗ ಸದ್ದಿಲ್ಲದಂತೆ ಮಾಯವಾಗಿದೆ. ದಿನಕ್ಕೆ ಸಾವಿರಗಟ್ಟಲೇ ಕೇಸ್ಗಳು