ಮಂಗಳೂರು: ದ.ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯಕ್ಕೂ ಕೊರೋನಾವೈರಸ್ ಭೀತಿ ತಟ್ಟಿದೆ. ಇದೇ ಕಾರಣದಿಂದ ದೇವಾಲಯದಲ್ಲಿ ನಡೆಯಲಿರುವ ಉತ್ಸವಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವರ ದರ್ಶನ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು, ಉತ್ಸವಗಳಿಗೆ ಮುಂದಿನ ಆದೇಶದವರೆಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಅಷ್ಟೇ ಅಲ್ಲದೆ, ಕುಕ್ಕೆ ದೇವಾಲಯಕ್ಕೆ ನಿತ್ಯ ಅಸಂಖ್ಯಾತ ಭಕ್ತರು ಬರುತ್ತಾರೆ. ಇವರಿಗೆ ತಂಗಲು ಹಲವು ಲಾಡ್ಜ್ ಗಳು ಲಭ್ಯವಿದೆ. ಆದರೆ ಸದ್ಯದ ಮಟ್ಟಿಗೆ ಇಲ್ಲಿ ತಂಗಲು