ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಹಿಂದಿನ ಬಿ.ಎಸ್.ವೈ ಸರಕಾರ ವಿಫಲವಾಗಿದೆ. ನೂತನ ಮುಖ್ಯಮಂತ್ರಿ ಎಷ್ಟು ಯಶಸ್ವಿಯಾಗುತ್ತಾರೆ ನಾವು ನೋಡಬೇಕು. ಅವರಿಗೆ ಬೇಕಾಗುವ ಮಂತ್ರಿ ಸ್ಥಾನ ಮಾಡಿಕೊಳ್ಳುವ ಅವಕಾಶ ಕೂಡ ಇಲ್ಲ. ಕೊರೋನಾ ಹೆಚ್ಚು ಉಲ್ಬಣಗೊಂಡಿದೆ. ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಜನರ ಕಷ್ಟ ಆಲಿಸಲು ಮಂತ್ರಿಗಳು ಕೂಡ ಇಲ್ಲ. ಇವೆಲ್ಲ ರಾಜಕೀಯ ಗೊಂದಲ ಮುಖ್ಯಮಂತ್ರಿ ಬದಲಾವಣೆ, ಈ ಸಮಯದಲ್ಲಿ ಬೇಕಿತ್ತಾ ಎಂದು ಪ್ರಶ್ನಿಸಿದರು.