ರಾಜ್ಯದ ಈ ಜಿಲ್ಲೆಯಲ್ಲಿ ನೋ ಲಾಕ್ ಡೌನ್

ಬಳ್ಳಾರಿ| Jagadeesh| Last Modified ಶನಿವಾರ, 18 ಜುಲೈ 2020 (14:25 IST)
ಈ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಸಧ್ಯಕ್ಕೆ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಿಲ್ಲ.
ಹೀಗಂತ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಈಗಾಗಲೇ ಬೇರೆ, ಬೇರೆ ಜಿಲ್ಲೆಗಳಲ್ಲಿ ಮಾಡಲಾದ‌ ಲಾಕ್ ಡೌನ್ ನ  ಪರಿಣಾಮ ನೋಡಿಕೊಂಡು ಅಗತ್ಯ ಎನಿಸಿದರೆ ಬಳ್ಳಾರಿಯಲ್ಲಿ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗುವುದು ಎಂದಿದ್ದಾರೆ.

ಜಿಂದಾಲ್ ನಲ್ಲಿ ತಪಾಸಣಾ ಪ್ರಮಾಣ ಹೆಚ್ಚಳಕ್ಕೆ ಸೂಚನೆ ನೀಡಿದ ಅವರು, ಸಂಡೂರಿನಲ್ಲಿ ನಡೆಸಲಾಗುತ್ತಿರುವ ಆರೋಗ್ಯ ಸುರಕ್ಷಾ‌ ಅಭಿಯಾನ ಬಳ್ಳಾರಿ, ಸಿರಗುಪ್ಪ ಮತ್ತು ಹೊಸಪೇಟೆ ನಗರಕ್ಕೆ ವಿಸ್ತರಿಸಲು ಸೂಚಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :