ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿದ್ದ ಎಫ್ಐಆರ್ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವುದು ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಹೇಳಿದ್ದಾರೆ ನಾನು ಯಾವುದೇ ತಪ್ಪು ಮಾಡದಿದ್ದರೂ ಸರಕಾರ ದ್ವೇಷ ಸಾಧನೆಗಾಗಿ ಎಸಿಬಿ ಬಳಸಿಕೊಂಡು ನನ್ನ ವಿರುದ್ಧ ಎಪ್ಐಆರ್ ದಾಖಲಿಸಿದೆ. ಒಂದಲ್ಲ ಎಷ್ಟೇ ಕೇಸ್ ದಾಖಲಿಸಿದ್ದರೂ ನಾನು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು. ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ. ಸತ್ಯ, ಪ್ರಾಮಾಣಿಕತೆಗೆ ಜಯ ದೊರೆತಿದೆ. ನನಗೆ ಸದಾ ನ್ಯಾಯಾಂಗದಲ್ಲಿ ವಿಶ್ವಾಸವಿದೆ.