ಜನಾರ್ದನ ರೆಡ್ಡಿ ಎಂಟ್ರಿಯಿಂದ ಗಂಗಾವತಿ ಅಖಾಡ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದ್ಕಡೆ ಹಾಲಿ ಬಿಜೆಪಿ ಶಾಸಕನಿಗೆ ನಡುಕ ಶುರುವಾಗಿದ್ರೆ. ಮತ್ತೊಂದೆಡೆ ಕಾಂಗ್ರೆಸ್ ಪಾಳಯದಲ್ಲೂ ತಳಮಳ ಸೃಷ್ಟಿಸಿದೆ. ಈ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ, ನಾನು ನಾಲ್ಕು ಬಾರಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. ಎರಡು ಬಾರಿ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಈ ಕಾರಣಕ್ಕೆ ಕ್ಷೇತ್ರದ ಜನ ನನ್ನ ಪರ ಇದ್ದಾರೆ.