ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಇನ್ನು ಹಿಂದೆಟು ಹಾಕುತ್ತಿರುವ ಬಿಬಿಎಂಪಿ. ಕಳೆದ ಒಂದು ತಿಂಗಳಲ್ಲಿ ಇಬ್ಬರು ವಾಹನ ಸವಾರರು ಬಿದ್ದು ಮೃತಪಟ್ಟರು ಹಾಗೂ ವಾಹನ ಸವಾರರು ಬಿದ್ದು ಗಾಯಗೊಳ್ಳುವ ಸಂಖ್ಯೆ ಹೆಚ್ಚಾದರೂ ಇನ್ನು ಎಚ್ಚೆತ್ತುಕೊಳ್ಳದೆ ನಗರದ ಹಲವಾರು ಕಡೆ ಇನ್ನು ಗುಂಡಿಗಳನ್ನು ಮುಚ್ಚದೆ ತೆರೆದೆ ಇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಿವಾಜಿನಗರದಲ್ಲಿ ಇನ್ನು ಹಲವಾರು ಕಡೆ ಗುಂಡಿಗಳನ್ನು ಮುಚ್ಚದೆ ತೆರೆದೆ ಇದ್ದು ವಾಹನ ಸವಾರರು ಈ ರಸ್ತೆ ಗುಂಡಿಗಳಿಂದ ಪರದಾಡುವಂತಾಗಿದೆ.