ದೂರು, ಸಲಹೆ ಹಾಗೂ ಅನ್ಯಾಯ ಸೇರಿ ಇನ್ನಿತರ ಮಾಹಿತಿ ನೀಡಲು ಇನ್ನು ಮುಂದೆ ಸಾರ್ವಜನಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಬೇಕಾದ ಅಗತ್ಯವಿಲ್ಲ. ವಾಟ್ಸಾಪ್ ಮೂಲಕವೂ ಸಹ ದೂರು ಅಥವಾ ವಿಡಿಯೋ ಹಂಚಿಕೊಳ್ಳಲು ಸಾಧ್ಯವಿದೆ ಎಂದು ನಗರ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ಧಾರೆ. ಅಪರಾಧ ಸೇರಿದಂತೆ ಇನ್ನಿತರ ತುರ್ತು ಮಾಹಿತಿಗಳನ್ನು ತಿಳಿಸಲು ಇಷ್ಟು ವರ್ಷಗಳ ಕಾಲ ನಗರದ ಜನರು 112 ಸಂಖ್ಯೆಗೆ ಕರೆ ಮಾಡುತ್ತಿದ್ದರು. ಸಂಬಂಧಪಟ್ಟ ಪೊಲೀಸರಿಗೆ, ಠಾಣೆಗಳಿಗೆ ಕಂಟ್ರೋಲ್