ಬಿಜೆಪಿ ನಾಯಕರಿಂದ ಉಕ್ಕಿನ ಮನುಷ್ಯ, ಭೀಷ್ಮ ಎಂದು ಕರೆಸಿಕೊಳ್ಳುತ್ತಿದ್ದ ಹಿರಿಯ ನಾಯಕ ಆಡ್ವಾಣಿ ರಾಜ್ಯಕ್ಕೆ ಬಂದರೂ ರಾಜ್ಯ ಬಿಜೆಪಿ ನಾಯಕರು ಕ್ಯಾರೆ ಎನ್ನದಿರುವ ಅಂಶ ಬೆಳಕಿಗೆ ಬಂದಿದೆ. ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಆಂಜನೇಯ ವಿಗ್ರಹಕ್ಕೆ ಅಳವಡಿಸಿರುವ ವಿಶೇಷ ಶಾಶ್ವತ ಪ್ರೊಜೆಕ್ಷನ್ ಪ್ರದರ್ಶನವನ್ನು ಲೋಕಾರ್ಪಣೆ ಮಾಡಲು ರಾಜ್ಯಕ್ಕೆ ಆಗಮಿಸಿದ್ದ ಆಡ್ವಾಣಿಯವರನ್ನು ಸ್ವಾಗತಿಸಲು ಕೂಡಾ ಯಾರೊಬ್ಬ ಪ್ರಮುಖ ನಾಯಕರು ಉಪಸ್ಥಿತರಿರಲಿಲ್ಲವೆಂದು ಮೂಲಗಳು ತಿಳಿಸಿವೆ. ಮಾಜಿ ಉಪಪ್ರಧಾನಿ ಆಡ್ವಾಣಿಯವರ ಭೇಟಿ