ಕರ್ನಾಟಕ ಚುನಾವಣಾ ಕಾವು ದಿನೇ ದಿನೇ ಏರುತ್ತಿದ್ದು, ಕರ್ನಾಟಕ ಚುನಾವಣಾ ಹಿನ್ನಲೆ ಮೊದಲ ಭಾರಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ದಾವಣಗೆರೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ನಡೆಸಿದ್ರು. ಈ ವೇಳೆ ಪೇಟ ತೊಡಿಸಿ, ಕಂಬಳಿ ಹೊದಿಸಿ ಯೋಗಿ ಆದಿತ್ಯನಾಥ್ ಗೆ ಸನ್ಮಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಸಿಎಂ ಸಿದ್ದರಾಮಯ್ಯ ಸರ್ಕಾರ ಸಮಾಜ ವಿರೋಧಿ ಸರ್ಕಾರ, ಜಿಹಾದಿ ತತ್ವಗಳನ್ನು ಹರಿಯಬಿಡುತ್ತಿದೆ.