ಬೆಂಗಳೂರು: ಮಹತ್ವಕಾಂಕ್ಷೆಯ ನೀರಾವರಿ ಯೋಜನೆಯಾದ ಮಹದಾಯಿ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷವಾದ ಬಿಜೆಪಿ ಹಿಂದೇಟು ಹಾಕಿದೆ. ಒಂದು ವೇಳೆ ಪ್ರಸ್ತಾಪಿಸಿದಲ್ಲಿ ನಮ್ಮ ಬುಡಕ್ಕೆ ಬರುತ್ತದೆ ಎನ್ನುವ ಬಿಜೆಪಿ ನಾಯಕರ ಆತಂಕಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.