ರಾಜಧಾನಿಯಲ್ಲಿ ನಿತ್ಯ ನಡೆಯೋ ಪ್ರತಿಭಟನೆಗಳ ವಿರುದ್ಧ ಬಿಬಿಎಂಪಿ ಗರಂ ಆಗಿದ್ದು, ಹತೋಟಿಗಾಗಿ ಕ್ರಮ ಕೈಗೊಳ್ಳೋಕೆ ಮುಂದಾಗಿದೆ. ಪುರಭವನದಲ್ಲಿ ಇನ್ಮುಂದೆ ಪ್ರತಿಭಟನೆ, ಮುಷ್ಕರ ಮೊದಲಾದವುಗಳನ್ನು ಮಾಡುವಂತಿಲ್ಲ. ಇಂತಹ ಮಹತ್ವದ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ. ಕೆಲವರು ಅನುಮತಿ ಪಡೆಯದೇ ಪ್ರತಿಭಟನೆ ಮಾಡುತ್ತಿದ್ದಾರೆ.ಇದರಿಂದ ಪುರಭವನ ಕಾಯ್ದಿರಿಸಿ ಹಣ ಪಾವತಿ ಮಾಡಿದವರಿಗೆ ತೊಂದರೆಯುಂಟಾಗುತ್ತಿದೆ ಅಂತ ಸಭೆಯ ಗಮನಕ್ಕೆ ತರಲಾಯಿತು.