ಬೆಂಗಳೂರು: ಉತ್ತರ ಕರ್ನಾಟಕ ನಿರ್ಲಕ್ಷ್ಯಗೊಳಗಾಗಿದೆ ಎಂದು ಆಪಾದಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಎದ್ದಿರುವ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟಗಾರರು ಸ್ಪಷ್ಟಪಸಿದ್ದಾರೆ.ಆಗಸ್ಟ್ 2 ರಂದು ಇದೇ ಕಾರಣಕ್ಕೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಈ ಬಂದ್ ನಮ್ಮ ಬೆಂಬಲವಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟಗಾರರು ಹೇಳಿದ್ದಾರೆ.ನಮ್ಮ ಸೌಲಭ್ಯಗಳನ್ನು ಮುಂಬೈ-ಕರ್ನಾಟಕ ಮಂದಿ ಕಸಿದುಕೊಳ್ಳುತ್ತಿದ್ದಾರೆ. ನಮ್ಮ ಹೋರಾಟಗಳಿಗೆ ಅವರ ಬೆಂಬಲವಿಲ್ಲ. ಬೇಕಿದ್ದರೆ ಅವರಿಗೆ ವಿಶೇಷ ಸ್ಥಾನಮಾನದಡಿ ನೆರವು ನೀಡಲಿ.