ಬೆಂಗಳೂರು : ತೆರಿಗೆ ಪಾವತಿ ಮಾಡುವವರು ಯಾರೂ ನಮಗೆ ಗೃಹಲಕ್ಷ್ಮಿ ಬೇಕು ಅಂತ ಕೇಳುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೃಹಲಕ್ಷ್ಮಿಗೆ ಕಂಡಿಷನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾವು ಸರ್ಕಾರ ನಾವು ತೀರ್ಮಾನ ಮಾಡುವುದಾಗಿ ಹೊಸ ವರಸೆ ತೆಗೆದರು.ಒಬ್ಬರಿಗೆ ಒಂದು ರೂಪಾಯಿ ಕೊಡಬೇಕಾದ್ರೆ ಅಕೌಂಟ್ ಇರಬೇಕು. ವೋಟರ್ ಐಡಿ, ಆಧಾರ್ ಕಾರ್ಡ್ ಇರಬೇಕು. ಅವರದ್ದೇ ಬ್ಯಾಂಕ್ ಅಕೌಂಟ್ ಇರಬೇಕು. ನಮ್ಮ ಬಳಿ ಎಲ್ಲಾ ದಾಖಲೆ