ರಾಜ್ಯದಲ್ಲಿ ಈಗ ಬೇಸಿಗೆಯ ಕಾವು ಮಾತ್ರ ಹೆಚ್ಚಾಗ್ತಿಲ್ಲ. ಚುನಾವಣಾ ಕಾವು ಬೇಸಿಗೆಯನ್ನೇ ಓವರ್ಟೇಕ್ ಮಾಡುವಷ್ಟು ಹೆಚ್ಚಾಗಿದೆ. ಹವಾಮಾನಕ್ಕೆ ತಕ್ಕಂತೆ ಸ್ಥಳ ಬದಲಿಸೋ ಪಕ್ಷಿಗಳಂತೆ, ಅಧಿಕಾರಕ್ಕಾಗಿ ಪಕ್ಷ ಬದಲಿಸೋ ರಾಜಕಾರಣಿಗಳ ಚದುರಂಗದಾಟವೂ ಆರಂಭವಾಗಿದೆ. ಅವರು ಹೇಳಿದ್ದೇ ಫೈನಲ್ ಎಂದುಕೊಂಡಿದ್ದ ರಾಜಕೀಯ ನಿಪುಣರ ಲೆಕ್ಕಾಚಾರ ಈಗಾಗಲೇ ತಲೆಕೆಳಗಾಗುತ್ತಿದೆ. ಇದೆಲ್ಲದರ ಮಧ್ಯ ಚುನಾವಣಾ ಆಯೋಗ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಬೇಕಿರೋ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.