ತುಮಕೂರು :ನನಗೂ ಹಾಸನಕ್ಕೂ ಏನು ಸಂಬಂಧವಿದೆಯೋ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ನೀಡಿರುವುದರಿಂದ ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ . ಅಲ್ಲಿ ವಾಮಾಚಾರ ಮಾಡ್ತಾರೆ ಎಂದಿದ್ದರು .ಆದರೆ ನಾನು ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ನಾವು ಉಗ್ರನರಸಿಂಹಸ್ವಾಮಿ ಭಕ್ತರು, ಹಾಗಾಗಿ ನಮಗೆ ಯಾವ ವಾಮಚಾರನೂ ತಾಕೋದಿಲ್ಲ ಎಂದು ಹೇಳಿದ್ದಾಗಿ ಕೆ.ಎನ್. ರಾಜಣ್ಣ ನುಡಿದರು.