ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಅಷ್ಟೇ ಅಲ್ಲ ಹಲವು ಸಚಿವರ ಮೊಬೈಲ್ ಟ್ಯಾಪ್ ಆಗಿದ್ದು, ಬಿಜೆಪಿ ನಾಯಕರ ಮೊಬೈಲ್ ಸಂಖ್ಯೆಗಳೂ ಟ್ಯಾಪ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ಸಂಖ್ಯೆ ಟ್ಯಾಪ್ ಆಗಿದೆಯಂತೆ. ಆದರೆ ಯಾರು ಟ್ಯಾಪ್ ಮಾಡ್ತಿದ್ದಾರೆ ಎಂದು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ