ಬೆಂಗಳೂರು: ಐಟಿ ಇಲಾಖೆಯಿಂದ ಸಮನ್ಸ್ ಬಂದ ಹಿನ್ನಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.ನಾನು ಐಟಿ ಇಲಾಖೆಯ ಅಧಿಕಾರಿಗಳ ಎದುರು ಇಂದು ಹಾಜರಾಗುತ್ತಿರುವುದು ನಿಜ. ಆದರೆ ನನಗೆ ಸಮನ್ಸ್ ಬಂದ ಹಿನ್ನಲೆಯಲ್ಲಿ ಹಾಜರಾಗುತ್ತಿಲ್ಲ. ನಾನು ಐಟಿ ಇಲಾಖೆಗೆ ಕೆಲವು ದಾಖಲೆಗಳನ್ನು ಒದಗಿಸಬೇಕಿತ್ತು. ಅದಕ್ಕೆ ಸ್ಪಷ್ಟೀಕರಣ ನೀಡಲು ಹಾಜರಾಗುತ್ತಿದ್ದೇನೆ ಎಂದು ಸಚಿವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.ಇದಕ್ಕೂ ಮೊದಲು ಡಿಕೆ ಶಿವಕುಮಾರ್ ಗೆ ಐಟಿ ಇಲಾಖೆ