ಬೆಂಗಳೂರು : ಸೂಕ್ತ ಕೆಲಸ ಸಿಗದೆ ವಿದ್ಯಾರ್ಥಿನಿಯೊಬ್ಬಳು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿ, ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಉಡುಪಿಯ 23 ವರ್ಷದ ಸಹನಾ ಆತ್ಮಹತ್ಯೆಯ ವಿಷಯ ತಿಳಿದು ದುಃಖವಾಗಿದೆ. ಎಂಬಿಎ ಪದವಿ ಪಡೆದರೂ ಸಹ ಸೂಕ್ತ ಕೆಲಸ ದೊರೆಯದೆ ಆಕೆ ಸಾವಿಗೆ ಶರಣಾಗಿದ್ದಾಳೆ.ನಿರುದ್ಯೋಗದಿಂದ ಪ್ರಾಣಕಳೆದುಕೊಂಡಿರುವ