ಮೈಸೂರು : ಡಿಸಿ ಆಗಿದ್ದ ವೇಳೆ ಹಲವು ವ್ಯತ್ಯಯಗಳಿಗೆ ಕಾರಣರಾಗಿದ್ದ ಹಿನ್ನೆಲೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ವಸತಿ ಇಲಾಖೆ ನೋಟಿಸ್ ನೀಡಿದೆ. ಮೈಸೂರು ಡಿಸಿ ಆಗಿದ್ದ ವೇಳೆ 4 ಆರೋಪಗಳಿಗೆ ಜುಲೈ 30 ರಂದು ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗಿ ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ ರವಿಶಂಕರ್ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದೀಗ ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲಾಗಿದ್ದು, ಬೆಂಗಳೂರಿನ ವಿಕಾಸಸೌಧದ ವಸತಿ ಇಲಾಖೆಗೆ ಆಗಮಿಸಿ