ಡಿಕೆಶಿ ಆಪ್ತೆ ಲಕ್ಷ್ಮಿ ಹೆಬ್ಬಾಳ್ಕರ್​ಗೂ ಇಡಿ ನೊಟೀಸ್​ ಜಾರಿ

ಬೆಂಗಳೂರು| pavithra| Last Modified ಬುಧವಾರ, 18 ಸೆಪ್ಟಂಬರ್ 2019 (10:19 IST)
ಬೆಂಗಳೂರು : ಅಕ್ರಮ ಹಣ ಹೊಂದಿದ ಆರೋಪದಡಿ ಈಗಾಗಲೇ ಇಡಿ ವಶದಲ್ಲಿರುವ ಡಿಕೆ ಶಿವಕುಮಾರ್​ ಅವರ ಆಪ್ತರಲ್ಲೊಬ್ಬರಾದ ಲಕ್ಷ್ಮಿ ಹೆಬ್ಬಾಳ್ಕರ್ ​ಗೂ ಇಡಿ ನೊಟೀಸ್​ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಡಿಕೆಶಿ ಖಾತೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಖಾತೆಗೆ ಹಣ ವರ್ಗಾವಣೆ ಆದ ಹಿನ್ನಲೆಯಲ್ಲಿ  ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಅಧಿಕಾರಿಗಳಿಗೆ ಸೆ.14ರಂದೇ ಸಮನ್ಸ್ ನೀಡಿದ್ದು, ಆದರೇ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಇದೀಗ ಸೆಪ್ಟಂಬರ್ 19ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಒಬ್ಬರಲ್ಲ, ಇಬ್ಬರಲ್ಲ ಇಡಿ ಪಟ್ಟಿಯಲ್ಲಿ 184 ಜನ ಇದ್ದಾರಂತೆ. ಈ ಎಲ್ಲರಿಗೂ ಇಡಿ ನೋಟೀಸ್​ ನೀಡಿದೆ. '184 ಜನರಿಗೆ ಇಡಿ ನೋಟಿಸ್​ ನೀಡಿದೆ. ಅವರಲ್ಲಿ ನಾನು ಒಬ್ಬ ಅಷ್ಟೆ,' ಎಂದು ಹೇಳಿದ್ದಾರೆ.


ಸೆಪ್ಟಂಬರ್ 19ರಂದು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ಅದಕ್ಕೂ ಮೊದಲು ಇಡಿ ಅಧಿಕಾರಿಗಳಲ್ಲಿ ನಮ್ಮ ಮನೆಯಲ್ಲಿಯೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದೇನೆ. ಅದು ಬೆಳಗಾವಿಯಾದೂರ ಸರಿ, ಬೆಂಗಳೂರಿನ ಮನೆಯಲ್ಲಿ ಆದರೂ ಸರಿ. ನಾನು ವಿಚಾರಣೆಗೆ ಹಾಜರಾಗಲು ಸಿದ್ದನಿದ್ದೇನೆ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :