ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡೆಲಿವರಿ ಬಾಯ್ ರೂಪದಲ್ಲಿ ಕಳ್ಳತನ ಮಾಡುತ್ತಿದ್ದ ಬಾಲಾಜಿ ಎಂಬ ಕುಖ್ಯಾತ ಮನೆಗಳ್ಳನ ಬಂಧಿಸಿದ್ದಾರೆ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದು, 2005ರಿಂದ ಇಲ್ಲಿವರೆಗೂ ಒಟ್ಟು 78 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿಯಿಂದ 75 ಲಕ್ಷ ಬೆಲೆಬಾಳುವ 2 kg ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈತನ ಮೇಲೆ ಒಟ್ಟು 17 ಕೇಸ್ಗಳು ದಾಖಲಾಗಿದ್ದವು.