ಉಡುಪಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗುತ್ತಿಗೆದಾರ ಸಂತೋಷ್ ನಿರ್ವಹಿಸಿರುವ ₹ 4 ಕೋಟಿ ಬಿಲ್ತಕ್ಷಣ ಬಿಡುಗಡೆ ಮಾಡಬೇಕು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ಸಂತೋಷ್ ಕುಟುಂಬಕ್ಕೆ ₹ 1 ಕೋ ಟಿ ಪರಿಹಾರ ನೀಡಬೇಕು. ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು. ಆತ್ಮಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್ಐಆರ್ ಆಗಿದ್ದರೂ , ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಮೂವರನ್ನೂ ಬಂಧಿಸಲು ಬೇಕಿರುವಷ್ಟು ಸಾಕ್ಷ್ಯಗಳು ಸಂತೋಷ್ ಮೊಬೈಲ್ನಲ್ಲಿದೆ. ಸಾಕ್ಷ್ಯ ತಿರುಚಲು ಹುನ್ನಾರ ನಡೆಯುತ್ತಿರುವ ಶಂಕೆಯಿದೆ