ಗಣಕಯಂತ್ರದಲ್ಲಿ ಕನ್ನಡ ಭಾಷೆ ಬಳಕೆಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವಂತೆ ನುಡಿ ತಂತ್ರಾಂಶವನ್ನು ಅಪ್ಡೇಟ್ ಮಾಡಲಾಗಿದ್ದು, `ನುಡಿ 6.0′ ಆವೃತ್ತಿಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದಾರೆ. ಕನ್ನಡ ಗಣಕ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರೂಪಿಸಿರುವ ನೂತನ ತಂತ್ರಾಂಶವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು.ಸದ್ಯ ಚಾಲ್ತಿಯಲ್ಲಿರುವ ನುಡಿ 5.0 ತಂತ್ರಾಂಶದಲ್ಲಿ ಯೂನಿಕೋಡ್ ಜತೆಗೆ ಆಸ್ಕಿ ಪದ್ಧತಿಯಲ್ಲೂ ಅಕ್ಷರಗಳಿವೆ. ಹಾಗಾಗಿ ಹೊಸ ತಂತ್ರಾಂಶವನ್ನು ಸಂಪೂರ್ಣವಾಗಿ ಯೂನಿಕೋಡ್ ಮಾದರಿಯಲ್ಲಿ ರೂಪಿಸಲಾಗಿದೆ.