ಬೆಂಗಳೂರು : ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಗಾರ್ಮೆಂಟ್ಸ್ ನೌಕರನನ್ನು ಹತ್ಯೆ ಮಾಡಿದ ಮಹಿಳೆಯ ಸಹೋದರ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಆಟೋದಲ್ಲಿ ಶವದೊಂದಿಗೆ ಬಂದು ಠಾಣೆಗೆ ಶರಣಾಗಿದ್ದಾರೆ. ಹೊಸೂರು ಮದನಪಲ್ಲಿ ನಿವಾಸಿ ಗಾರ್ಮೆಂಟ್ಸ್ ಕಾರ್ಖಾನೆ ನೌಕರ ಭಾಸ್ಕರ್ (31) ಕೊಲೆಯಾದ ವ್ಯಕ್ತಿ. ಮಹಿಳೆಯ ಸಹೋದರ ಮುನಿರಾಜು (28) ಹಾಗೂ ಸಹಚರರಾದ ಮಾರುತಿ (22), ನಾಗೇಶ್ (22), ಪ್ರಶಾಂತ್