ಮೇಜರ್ ಟ್ವಿಸ್ಟ್ ನೀಡಿದ ಕಚೇರಿಗಳ ದಾಳಿ!

ಬೆಂಗಳೂರು| Ramya kosira| Last Updated: ಗುರುವಾರ, 25 ನವೆಂಬರ್ 2021 (20:43 IST)


ಬೆಂಗಳೂರು ಅಭಿವೃದ್ಧಿ ಪ್ರಧಿಕಾರ ಕಚೇರಿಗಳ ಮೇಲೆ ದಾಳಿ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
5 ಕಚೇರಿಗಳಲ್ಲಿ ತಲಾಶ್ ವೇಳೆ ಮಹತ್ವದ ದಾಖಲೆಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ದಾಖಲೆಗಳು ಎಲ್ಲಿ ಹೋದ್ವು, ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ ಅನ್ನೋ ಉತ್ತರ ಬಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಕೇಳಿಬರುತ್ತಿದೆ. ಜೊತೆಗೆ ನಮಗೂ ನಿವೇಶನ ಹಂಚಿಕೆಗೂ ಸಂಬಂಧವಿಲ್ಲ ಅಂತ ಒಂದ್ಕಡೆ ಸಿಬ್ಬಂದಿ ಹೇಳಿದ್ರೆ, ಮತ್ತೊಂದು ಕಡೆ ಅಧಿಕಾರಿಗಳು ಹಿಂದಿನ ಅವಧಿಯಲ್ಲಾಗಿದೆ ಅಂತ ನುಣುಚಿಕೊಳ್ತಿದ್ದಾರೆ. ಹೀಗೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪ ಮಾಡ್ತಿದ್ದಾರೆ. ಇದೀಗ ಎಸಿಬಿ ಅಧಿಕಾರಿಗಳು ಲೇಔಟ್ಗಳ ಎಲ್ಲಾ ಮಾಹಿತಿ ಇರೋ ಇಂಜಿನಿಯರ್ಸ್ ಬೆನ್ನಿಗೆ ಬಿಳುತ್ತಿದಂತೆ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹೃದಯ ಬಡಿತ ಶುರುವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :