ಅಭಿವೃದ್ಧಿ ಕುರಿತು ಚರ್ಚೆ ನಡೆಸಬೇಕಿದ್ದ ಸಾಮಾನ್ಯ ಸಭೆ ಅಧಿಕಾರಿಗಳೇ ಚಕ್ಕರ್ ಹೊಡೆದಿದ್ದರು. ಅಧಿಕಾರಿಗಳ ನಡೆ ಕಂಡು ಅಧ್ಯಕ್ಷ ಗರಂ ಆದ ಘಟನೆ ನಡೆದಿದೆ. ಸಾಮಾನ್ಯ ಸಭೆಗೆ ಚಕ್ಕರ್ ಹೊಡೆಯುವ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದೆಂದು ಗುಂಡ್ಲುಪೇಟೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಜಗದೀಶ್ ಮೂರ್ತಿ ಖಡಕ್ಕಾಗಿ ಎಚ್ಚರಿಸಿದ್ದಾರೆ.ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಅಧ್ಯಕ್ಷ ಜಗದೀಶ್ ಮೂರ್ತಿ ಕೆಂಡಾಮಂಡಲರಾದರು.ಇಲಾಖಾವಾರು ಅನುಪಾಲಾನಾ ವರದಿ ಮಂಡಿಸಿದ ಸಂದರ್ಭದಲ್ಲಿ