2012 ರಲ್ಲಿ ಓಕಳಿಪುರಂ ಅಷ್ಟಪತ ಕಾಮಗಾರಿಗೆ ವರ್ಕ್ ಆರ್ಡರ್ ಆಗಿತ್ತು. 2014ರಲ್ಲಿ ಆರಂಭವಾಗಿ 2016ಕ್ಕೆ ಮುಗಿಯಬೇಕಿತ್ತು. ಆದ್ರೆ ಇಂದಿಗೂ ಆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಹೀಗಿರೋವಾಗ, ಒಂದು ವೇಳೆ ಓಕಳಿಪುರಂ ಪ್ರಾಜೆಕ್ಟ್ ಮುಗಿದ ನಂತರ, ಮೆಜೆಸ್ಟಿಕ್ನಿಂದ ಬರೋ ವಾಹನಗಳು ಮಾಗಡಿ ರಸ್ತೆ, ಬಸವೇಶ್ವರನಗರ, ಮೈಸೂರು ಸರ್ಕಲ್ಗೆ ಹೋಗೋವಾಗ ಮಧ್ಯದಲ್ಲೇ ಟ್ರಾಫಿಕ್ ಜ್ಯಾಂ ಆಗುತ್ತೆ. ಅದಕ್ಕಾಗಿ ಹೊಸ ಫ್ಲೈಓವರ್ ನಿರ್ಮಾಣ ಮಾಡಬೇಕು ಅಂತ ಬಿಬಿಎಂಪಿ ಆಲೋಚಿಸಿ ಆರಂಭಿಸಿದ ಪರ್ಯಾಯ ಫ್ಲೈಓವರ್ ಈಗಾಗಲೇ ಲೋಕಾಪರ್ಣೆಗೆ ಸಿದ್ದವಾಗಿದೆ. ಫೆಬ್ರವರಿ 28 ರಂದು ಉದ್ಘಾಟನೆಯನ್ನು ಮಾಡಲಾಗುತ್ತೆ ಅಂತ ಈಗಾಗಲೇ ಸಿಎಂ ಕೂಡ ತಿಳಿಸಿದ್ದಾರೆ.