ಬೆಂಗಳೂರು: ಕಾಂಗ್ರೆಸ್ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಮೇಲೆ ಪದೇ ಪದೇ ಕೇಂದ್ರದ ಐಟಿ, ಸಿಬಿಐ ಬ್ಯೂರೋಗಳು ದಾಳಿ ನಡೆಸುತ್ತಿರುವುದಕ್ಕೆ ರಾಜ್ಯ ಒಕ್ಕಲಿಗರ ಸಂಘ ಗರಂ ಆಗಿದೆ.ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕಲಿಗರ ಸಂಘದ ಅಧ್ಯಕ್ಷ ಡಿಎನ್ ಬೆಟ್ಟೇಗೌಡ ಡಿಕೆಶಿ ವಿರುದ್ಧ ದಾಳಿ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.ಪದೇ ಪದೇ ಡಿಕೆಶಿ ಕುಟುಂಬ ಮತ್ತು ಆಪ್ತರ ಮೇಲೆ ಈ ರೀತಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ.