ಓಲಾ ಸಂಚಾರ ನಿಷೇಧ ಆದೇಶ ವಾಪಸ್; ಸಚಿವ ಪ್ರಿಯಾಂಕ್ ಖರ್ಗೆಯ ಕಾಲೆಳೆದ ನೆಟ್ಟಿಗರು

ಬೆಂಗಳೂರು, ಸೋಮವಾರ, 25 ಮಾರ್ಚ್ 2019 (12:14 IST)

ಬೆಂಗಳೂರು : ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಟ್ರೋಲ್ ಮಾಡಿದ್ದಾರೆ.


ಪರವಾನಿಗೆಯನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಆರು ತಿಂಗಳುಗಳ ಕಾಲ  ಓಲಾ ಸಂಚಾರಕ್ಕೆ  ಸಾರಿಗೆ ಇಲಾಖೆ ನಿಷೇಧ ಹೇರಿತ್ತು. ಬಳಿಕ  ಈ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ನಿಷೇಧ ವಾಪಸ್ ಪಡೆದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿ, ಇಂದಿನಿಂದ ಎಂದಿನಂತೆ ಓಲಾ ಸಂಚರಿಸಲಿದೆ ಎಂದು ಹೇಳಿಕೊಂಡಿದ್ದರು.


ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ  ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿದ್ದು, ಎಲೆಕ್ಷನ್ ಫಂಡ್ ಗೆ ಈ ಡ್ರಾಮಾನಾ ಅಂತಾ ಕೆಲವರು ಸಚಿವ ಖರ್ಗೆಯನ್ನು ಪ್ರಶ್ನಿಸಿದ್ದಾರೆ. ನಿಷೇಧ ಹೇರಿದ ಎರಡೇ ದಿನದಲ್ಲಿ ಹೇಗೆ ಸಮಸ್ಯೆ ಬಗೆಹರಿದಿದೆ? ಓಲಾ ನಿಷೇಧವನ್ನು ಅಷ್ಟು ಸುಲಭವಾಗಿ ಎರಡು ದಿನದಲ್ಲಿ ಬಗೆಹರಿಸಿದ್ದು ಹೇಗೆ? ಇದು ಎಲೆಕ್ಷನ್ ಫಂಡ್ ಗೆ ಮಾಡಿರುವ ಗಿಮಿಕ್ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಚಾರದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಭ್ಯರ್ಥಿ

ಕಾಶ್ಮೀರ : ಚುನಾವಣಾ ಪ್ರಚಾರದ ವೇಳೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ಪಾಕಿಸ್ತಾನದ ಪರ ಘೋಷಣೆ ...

news

ಮಂಡ್ಯದಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರದ ದುರುಪಯೋಗವಾಗುತ್ತಿದೆ- ಸುಮಲತಾರಿಂದ ಆರೋಪ

ಮಂಡ್ಯ : ಮಂಡ್ಯದಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರದ ದುರುಪಯೋಗವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ...

news

ನೀತಿ ಸಂಹಿತೆ ಉಲ್ಲಂಘನೆ ; ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್ ಸಿಂಹ ವಿರುದ್ಧ ಎಫ್‍.ಐ.ಆರ್ ದಾಖಲು

ಮೈಸೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸುವ ದಿನವೇ ಮೈಸೂರು ...

news

ಮೋದಿ ಅಲೆ ಎಲ್ಲೆಡೆ ಇದೆ ಎಂದ ಕೈ ನಾಯಕ

ಎಲ್ಲಡೆ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಇದೆ. ಹೀಗಾಗಿ ಕೈ ಪಾಳೆಯದವರು ಗೆಲ್ಲುವುದು ಕಷ್ಟ. ಹೀಗಂತ ...