ಆ ಬಾಲಕಿ ಪೂಜೆ ಮಾಡೋದಕ್ಕೆ ಅಂತ ತಮ್ಮ ಹೊಲಕ್ಕೆ ಹೊರಟಿದ್ದಳು ಆದರೆ ಹೊಲದಲ್ಲಿ ಆಕೆಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಧಾರವಾಡ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬಸೀರ್ ಗಡದಾರೆ ಎಂಬ ಆರೋಪಿಯು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಅತ್ಯಾಚಾರದಿಂದಾಗಿ ಆಘಾತಕ್ಕೆ ಒಳಗಾದ ಬಾಲಕಿ ಕ್ರಿಮಿನಾಶಕ ಸೇವಿಸಿ ನಡೆದ ಘಟನೆಯನ್ನು ಮನೆ ಮಂದಿಗೆ ಹೇಳಿದ್ದಾಳೆ. ಆಸ್ಪತ್ರೆಗೆ ಬಾಲಕಿಯನ್ನು ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಾಳೆ.