ಬೆಳಗಾವಿ : ಮನೆಯಲ್ಲಿ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ. ಭೀಮರಾವ್ ಮಾಳಗಿ ಮತ್ತು ಸುಗಂಧಾ ಮಾಳಗಿ ದಂಪತಿ ಪುತ್ರ ಮುತ್ತುರಾಜ ಮೃತ ಪಟ್ಟ ಬಾಲಕ. ಮನೆಯವರು ಬೇರೆ ಕೆಲಸದಲ್ಲಿ ತೊಡಗಿದ್ದಾಗ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಮಗು ಆಟವಾಡುತ್ತ ತಲೆ ಕೆಳಗಾಗಿ ಮಗುಚಿಬಿದ್ದು ಉಸಿರುಘಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಗುವಿನ ಸಾವಿನಿಂದ