ಬೆಂಗಳೂರು: ಮಗು ಕಿಡ್ನಾಪ್ ಮಾಡಿ ಮಾರಾಟ ಮಾಡಿದ್ದ ಯುವಕನೊಬ್ಬನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರಿಂದ ಕಾರ್ತಿಕ್ (24) ಎಂಬಾತನನ್ನು ಬಂಧಿಸಿದ್ದಾರೆ. ಕಳೆದ ವರ್ಷ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ನಲ್ಲಿ ಬಾಲಕನ ಕಳ್ಳತನವಾಗಿದ್ದು, ಮಗು ಕಳ್ಳತನ ಮಾಡಿ ಹೊಸೂರು ಬಳಿಯ ಯಮರೆ ಎನ್ನುವ ಗ್ರಾಮದಲ್ಲಿ ಮಾರಾಟ ಮಾಡಿದ್ದ. ಅರವತ್ತು ಸಾವಿರಕ್ಕೆ ಮಾರಾಟ ಮಾಡಿದ್ದ ಕಾರ್ತಿಕ್ ಪರಿಚಿತರ ಮನೆಯಲ್ಲಿಯೇ ಮಗು ಕಿಡ್ನಾಪ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ