ಈರುಳ್ಳಿ ಬೆಲೆಯು ಕಳೆದೆರಡು ತಿಂಗಳಿಂದ ಜನರನ್ನು ಕಂಗೆಡಿಸುತ್ತಿರುವಂತೆ ಮತ್ತೆ ದರ ಏರಿಕೆಯಾಗಿರೋದು ಜನತೆಗೆ ಶಾಕ್ ನೀಡಿದಂತಾಗಿದೆ. ಬೆಲೆ ಇನ್ನೇನು ಕಡಿಮೆ ಆಯಿತು ಅಂತ ಸಮಾಧಾನ ಪಟ್ಟುಕೊಳ್ಳುವ ಮೊದಲೇ ಈರುಳ್ಳಿ ಬೆಲೆ ಮತ್ತೆ ಹೆಚ್ಚಳಗೊಳ್ಳತೊಡಗಿದೆ.ಟರ್ಕಿ ಈರುಳ್ಳಿಯನ್ನು ರಫ್ತು ಮಾಡಲು ಅಲ್ಲಿನ ಸರಕಾರ ನಿರ್ಧಾರ ಮಾಡಿದೆ. ಹೀಗಾಗಿ ಭಾರತದಲ್ಲಿ ಈರುಳ್ಳಿ ಬೆಲೆಯೇ ಜನರಿಗೆ ಕಣ್ಣೀರು ತರಿಸೋ ಸಂದರ್ಭ ಬಂದಿದೆ.ಬೆಂಗಳೂರಿನಲ್ಲಿ ಈಗ ಪ್ರತಿ ಕೆಜಿಗೆ 130 ರಿಂದ 150 ರೂ. ಗೆ ಈರುಳ್ಳಿ ಮಾರಾಟವಾಗುತ್ತಿದೆ.