ಕೋಟೆ ನಾಡಿನಲ್ಲಿ ರೈತ ಸದಾ ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕುತ್ತಿದ್ದಾನೆ. ಅದರಂತೆ ಮಳೆಯನ್ನೆ ನಂಬಿ ಬಿತ್ತಿದ್ದ ಈರುಳ್ಳಿ ಮೊಳಕೆಯೊಡೆದಿವೆ. ಆದ್ರೆ ಇದೀಗ ಮಳೆಯೂ ಕೈ ಕೊಡುತ್ತಿದೆ. ಇತ್ತ ಕೊಳವೆ ಬಾವಿಯಲ್ಲೂ ಕೂಡ ನೀರಿನ ಪ್ರಮಾಣ ಕಡಿಮೆ ಆಗ್ತಾ ಇರೊದು ಈರುಳ್ಳಿ ಬೆಳೆಗಾರರಿಗೆ ಸಮಸ್ಯೆಯಾಗಿದೆ. ಒಂದು ವೇಳೆ ಮಳೆ ಬಂದು ಉತ್ತಮ ಬೆಲೆ ಸಿಗದೆ ಹೋದ್ರೆ ಈ ಭಾಗದ ರೈತರನ್ನ ದೇವರೇ ಕಾಪಾಡಬೇಕಾಗಿದೆ.