ಬೆಂಗಳೂರು: ಸರ್ಕಾರವೇನೋ ಆನ್ ಲೈನ್ ಕ್ಲಾಸ್ ನಡೆಸುವುದಕ್ಕೆ ಅನುಮತಿ ನೀಡಿದೆ. ಕೊರೋನಾದಿಂದಾಗಿ ಶಾಲೆ, ಕಾಲೇಜು ತೆರೆಯಲು ಸಾಧ್ಯವಾಗದ ಕಾರಣ ಇದು ಅನಿವಾರ್ಯವೂ ಹೌದು. ಆದರೆ ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ನೇತ್ರ ತಜ್ಞರ ಬಳಿ ಪರೀಕ್ಷಿಸಿಕೊಳ್ಳುವ ಪ್ರಮಾಣವೂ ಹೆಚ್ಚಿದೆ.