ನನ್ನ ಮಾತು ಕೇಳದಿದ್ದರೆ ನೀನೇನೂ ಕೀಳೋಕೆ ಇಲ್ಲಿರ್ತಿಯಾ ಮೊಮ್ಮಗನೆ? ಹೀಗಂತ ಮ್ಯಾನೇಜರ್ ಒಬ್ಬರಿಗೆ ಶಾಸಕ ಓಪನ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದೆ.ಸಾರಿಗೆ ಇಲಾಖೆ ಡಿಪೊ ಮ್ಯಾನೇಜರ್ ಗೆ ರಾಯಭಾಗ ಶಾಸಕರಿಂದ ಓಪನ್ ಧಮ್ಕಿ ಹಾಕಿದ ಘಟನೆ ನಡೆದಿದೆ. ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ರಾಯಭಾಗ ಕೇಂದ್ರ ಬಸ್ ನಿಲ್ದಾಣದಲ್ಲಿ ಮ್ಯಾನೇಜರ್ ನನ್ನು ಅವಾಚ್ಯ ಶಬ್ದಗಳಿಂದ ತರಾಟೆಗೆ ತೆಗೆದುಕೊಂಡರು.ನೀವು ಹಣ ತಿನ್ನಲಿ, ಬಿಡಲಿ.