ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ್ ತುಮಕೂರು ಜಿಲ್ಲೆಯ ಜನತೆಗೆ ನಾಟ್ ರೀಚಬಲ್ ಆಗಿದ್ದಾರಂತೆ.ಡಾ.ಜಿ.ಪರಮೇಶ್ವರ ಅವರ ತುಮಕೂರುನಲ್ಲಿರುವ ಜಿಲ್ಲಾ ಕಚೇರಿ ಬಾಗಿಲು ತೆರೆದಿಲ್ಲವೆಂಬ ಆರೋಪ ಕೇಳಿಬಂದಿದೆ. ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿ ತೆರೆದಿಲ್ಲ. ಕೊಠಡಿ ಸಂಖ್ಯೆ 114 ಬಾಗಿಲಲ್ಲಿ ನೇಮ್ ಬೋರ್ಡ್ ನೇತು ಹಾಕಲಾಗಿದೆ.ಆದ್ರೆ ಕಳೆದ ಆರು ತಿಂಗಳಿಂದಲೂ ಬೀಗ ಹಾಕಿ ಮುಚ್ಚಿದ ಬಾಗಿಲು ಮುಚ್ಚಿದಂತಿಗೆ.