ಮೈಸೂರು: ಚಾಮುಂಡಿಬೆಟ್ಟದಿಂದ ಮೃಗಾಲಯಕ್ಕೆ ಬಂದ ಚಿರತೆಯನ್ನ ಯಶಸ್ವಿಯಾಗಿ ಸೆರೆ ಹಿಡಿಯುವಲ್ಲಿ ಮೃಗಾಲಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಚಾಮುಂಡಿಬೆಟ್ಟದಿಂದ ನಿನ್ನೆ ರಾತ್ರಿ ಒಂದೂವರೆ ವರ್ಷದ ಗಂಡು ಚಿರತೆ ದಾರಿ ತಪ್ಪಿ ಮೃಗಾಲಯದೊಳಗೆ ಬಂದಿದೆ. ಆದರೆ ಅಪರಿಚಿತ ಪ್ರಾಣಿ ಮೃಗಾಲಯದ ಒಳಗೆ ಬಂದಿದ್ದನ್ನ ಕಂಡ ಮೃಗಾಲಯದ ಕೋತಿಗಳು ಜೋರಾಗಿ ಶಬ್ಧ ಮಾಡಲು ಆರಂಭಿಸಿವೆ. ಇದರಿಂದ ಗಾಬರಿಯಾದ ಚಿರತೆ ಮೃಗಾಲಯದಲ್ಲಿದ್ದ ದೊಡ್ಡಮರವೇರಿ ಕುಳಿತಿದೆ.ಬೆಳಗ್ಗೆ 8.30ಕ್ಕೆ ಮೃಗಾಲಯದ ಸಿಬ್ಬಂದಿ ಆಗಮಿಸಿದಾಗ ಕೋತಿಗಳ ಚೀರಾಟ ಕಂಡು ಮರ ನೋಡಿದಾಗ ಚಿರತೆ ಇರುವುದು ಕಂಡು ಬಂದಿದೆ. ಕೂಡಲೇ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ತಕ್ಷಣ ಆಗಮಿಸಿದ ಅಧಿಕಾರಿಗಳು