ರಾಜ್ಯದಲ್ಲಿ ಈ ಹಿಂದೆ ಆಪರೇಷನ್ ಕಮಲ ಸುದ್ದಿಯಾಗಿದ್ದರೆ ಇತ್ತ ಬಿಸಿಲೂರಿನಲ್ಲಿ ಆಪರೇಷನ್ ಹಸ್ತ ನಡೆಯುತ್ತಿರುವ ವದಂತಿಗಳು ಹರಿದಾಡಲಾರಂಭಿಸಿವೆ.ರಾಜ್ಯದಲ್ಲಿ ಕೈ-ತೆನೆ ದೋಸ್ತಿ ಇದ್ದು, ಮೈತ್ರಿ ಸರಕಾರ ನಡೆಯುತ್ತಿದೆ. ಆದರೆ ಕಲಬುರಗಿಯಲ್ಲಿ ಕೈ-ತೆನೆ ಕುಸ್ತಿ ಆಂತರಿಕವಾಗಿ ಶುರುವಾದಂತಿದೆ.ಕಲಬುರಗಿಯಲ್ಲಿ ಆಪರೇಶನ್ ಹಸ್ತ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರು ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ.ದೋಸ್ತಿ ಪಕ್ಷ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರನ್ನ ಸೆಳೆಯಲು ಮುಂದಾಗಿದ್ದ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ ಎನ್ನಲಾಗುತ್ತಿದೆ.ಕೈ ಪಾಳೆಯದ