ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ಗೌಡ ಸ್ಪರ್ಧೆ ಬಗ್ಗೆ ಕುಟುಂಬದೊಳಗೇ ಭಿನ್ನಾಭಿಪ್ರಾಯಗಳಿವೆ ಎಂಬುದು ಖಚಿತವಾಗಿದೆ. ಪ್ರಜ್ವಲ್ ಸ್ಪರ್ಧಿಸುತ್ತಾರೆ. ಅವರ ಸ್ಪರ್ಧೆಗೆ ತಾತ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಸಿರು ನಿಶಾನೆ ತೋರಿದ್ದಾರೆ ಎಂದು ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಹೇಳಿದ ಕೆಲ ಹೊತ್ತಿನಲ್ಲೇ ಜೆಡಿಸ್ ರಾಜ್ಯಾಧ್ಯಕ್ಷ, ಪ್ರಜ್ವಲ್ ಚಿಕ್ಕಪ್ಪ ಕುಮಾರಸ್ವಾಮಿ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದಿದ್ದಾರೆ.ಹೊಳೆನರಸೀಪುರ ತಾಲೂಕಿನ ಈಶ್ವರ ದೇವಾಲಯಕ್ಕೆ